ಕಣಜಕ್ಕೆ ಸುಸ್ವಾಗತ
ಜ್ಞಾನವನ್ನು ಕನ್ನಡದಲ್ಲಿ ನಿರಂತರವಾಗಿ ಪಡೆಯುವುದು. ಕನ್ನಡದ ಮೂಲಕ ’ಈ’ಜಗತ್ತನ್ನು ತಲುಪುವುದು. ಕನ್ನಡದಲ್ಲಿ ಮಾತನಾಡುತ್ತ, ಚರ್ಚಿಸುತ್ತ, ವಿಷಯಗಳನ್ನು ಹಂಚಿಕೊಳ್ಳುತ್ತ ಕನ್ನಡಿಗರಾಗಿದ್ದುಕೊಂಡೇ ವಿಶ್ವದ ಪ್ರಜೆಗಳಾಗುವುದು.ಮಾಹಿತಿ,ಮತ್ತು ಜ್ಞಾನವನ್ನು ಕಣಜದಿಂದ ಪಡೆಯುವುದು ಮಾತ್ರವಲ್ಲ ಕಣಜವನ್ನು ತಮ್ಮ ಅರಿವಿನಿಂದ ತುಂಬುವುದು. ಜಾಗತಿಕ ಅರಿವಿನ ಸ್ಫೋಟವನ್ನು ನಿರಂತರವಾಗಿ ಕನ್ನಡಕ್ಕೆ ಒಗ್ಗಿಸಿಕೊಳ್ಳುವುದು. ಇದೊಂದು ನಿರಂತರ ಪ್ರಕ್ರಿಯೆ. ಮೂರ್ತ ಅಮೂರ್ತಗಳೆರಡನ್ನೂ ಕನ್ನಡದಲ್ಲಿ ನಿರಂತರವಾಗಿ ಮೂಡಿಸುವ ಚಿಕ್ಕ ಪ್ರಯತ್ನ. ಈ ಕನ್ನಡ, ಈ ಕಣಜ ನಿಮಗಾಗಿ.

