logo

 

 


search_glob

ಸಿದ್ಧ ಪ್ರಶ್ನೆಗಳು

 

ಈ ಪೋರ್ಟಲ್ ಯಾರಿಗಾಗಿ?

- ಎಲ್ಲರಿಗಾಗಿ, ವಿಶೇಷವಾಗಿ ಕನ್ನಡದಲ್ಲಿ ಮಾಹಿತಿಯನ್ನು ಬಯಸುವವರಿಗಾಗಿ
- ಕನ್ನಡ ಭಾಷೆಯಲ್ಲಿ ವ್ಯವಹರಿಸುವವರಿಗಾಗಿ, ಕನ್ನಡ ಭಾಷೆ ಮಾತ್ರ ಗೊತ್ತಿರುವವರಿಗಾಗಿ
- ಬೇರೆ ಭಾಷೆ/ಭಾಷೆಗಳು ಗೊತ್ತಿದ್ದರೂ ಕನ್ನಡದಲ್ಲಿ ಹೊಸ ಹೊಸ ಅರಿವನ್ನು ಹುಡುಕುತ್ತಿರುವವರಿಗಾಗಿ
- ವಿದ್ಯಾರ್ಥಿಗಳು
- ರೈತರು,ಗೃಹಿಣಿಯರು
- ಸಂಶೋಧಕರು
- ವಿವಿಧ ವಿಷಯಗಳಲ್ಲಿ ಆಸಕ್ತಿ ಇರುವ ಜನರಿಗಾಗಿ

 

ಈ ಪೋರ್ಟಲ್ ಏಕೆ ಬೇಕು?

- ಹಂಚಿ ಹೋಗಿರುವ ಮಾಹಿತಿ ಮತ್ತು ಅರಿವನ್ನು ಒಂದು ತಾಣದಲ್ಲಿ ಸಿಗುವ ಹಾಗೆ ಮಾಡಲು
- ಸದಾ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳಿಗೆ ಕನ್ನಡದ ಮೂಲಕ ನಿರಂತರ ಸಂಪರ್ಕ ಉಂಟು ಮಾಡಲು
- ಕನ್ನಡವನ್ನು ಸ್ವಲ್ಪ ಮಾತ್ರ ಓದಲು ಬರೆಯಲು ಬರುವವರಿಗಾಗಿ,ಅಂಥವರು ಹೆಚ್ಚು ಹೆಚ್ಚು ಕನ್ನಡ ಬಳಸಿ ಮುಂದಿನ ಹಂತದ ಕನ್ನಡ ಕಲಿಯಲಿ ಎಂದು
- ೨೧ನೆಯ ಶತಮಾನದ ಉಳಿದ ೯೦ ವರ್ಷಗಳಿಗೆ ಕನ್ನಡ ಸಮಾಜವನ್ನು ಸಜ್ಜುಗಳಿಸಲು
- ಅರಿವು ಮತ್ತು ಮಾಹಿತಿ ಇಡೀ ಸಮಾಜದ ಸ್ವತ್ತು, ಅದನ್ನು ಎಲ್ಲ ಆಸಕ್ತರಿಗೆ ತಲುಪಿಸಲು

 

ಇದು ಕನ್ನಡ ವಿಕಿಪೀಡಿಯಾಗಿಂತ ಹೇಗೆ ಭಿನ್ನ?

- ಇದರ ಹಿಂದೆ ಕರ್ನಾಟಕ ಜ್ಞಾನ ಆಯೋಗ ಇದೆ
- ಕರ್ನಾಟಕ ರಾಜ್ಯ ಸರ್ಕಾರ ತನ್ನ ಮುಂಗಡ ಆಯವ್ಯಯದಲ್ಲಿ ಆರ್ಥಿಕ ಅನುದಾನ ನೀಡಿದೆ.
- ವಿಷಯದ ಗ್ರಹಿಕೆ ಮತ್ತು ಪ್ರಸ್ತುತಿ ವಿಕಿಪೀಡಿಯಾಗಿಂತ ಭಿನ್ನವಾಗಿದೆ.

 

ಕಣಜ ಎಂದರೇನು?

- ಮಾಹಿತಿಯ ಕಾಳುಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ ಅದನ್ನು ಮುಕ್ತವಾಗಿ ಎಲ್ಲರಿಗೂ ಸಿಗುವ ಹಾಗೆ ಮಾಡುವುದು
- ಬೆಳೆ ಬೆಳೆಯುವ ರೈತರು ಬಂದ ಬೆಳೆಯನ್ನು ಕಾಪಾಡಿಕೊಳ್ಳಲು ಮಾಡಿಕೊಂಡಿರುವ ಒಂದು ವ್ಯವಸ್ಥೆ

 

ಕಣಜ ಮಾಡುತ್ತಿರುವವರು ಯಾರು?

- ಕರ್ನಾಟಕ ಜ್ಞಾನ ಆಯೋಗ ಮತ್ತು ನಾಡಿನ ಜನತೆ,ಸಹಕಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ

 

This page was last modified on 05 December 2009 at 10:33.

ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಳಿಗಾಗಿ ಕೆಳಗಿನ ಈ ಮೇಲ್ ವಿಳಾಸದಲ್ಲಿ /ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ. projectmanager@kanaja.in | +91.80.2203.3297