logo

 

 


ಸಾಹಿತ್ಯ

search_glob

ಸಾಹಿತ್ಯ ವಿಭಾಗಗಳು

Browse popular searches within This Topic
ಕನ್ನಡ ಸಾಹಿತ್ಯ

ದಿನದ ಲೇಖನ

ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ, ಮೇಲಾಗಿ ಕವಿ. ೧೨ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಇವರ ವ್ಯಕ್ತಿತ್ವ ಬಹುಮುಖವಾದುದಾದರೂ ಇವರನ್ನು ಕುರಿತು ಅನೇಕ ವ್ಯಗಳು ರಚಿತವಾಗಿದ್ದರೂ ಅವುಗಳಲ್ಲಿ ಯಾವುದರಲ್ಲೂ ಇವರ ವ್ಯಕ್ತಿತ್ವದ ಸಮಗ್ರ ಯಥಾವತ್ತಾದ ಚಿತ್ರಣ ಮೂಡಿ ಬಂದಿಲ್ಲ. ಅವೆಲ್ಲ ಪವಾಡಗಳಲ್ಲಿ ಹುದುಗಿ ಹೋಗಿವೆ. ಆದರೆ ೧೪೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ಇವರ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರವನ್ನೂ ಸಾಧನೆಗಳನ್ನೂ ಕಾಣಬೇಕಾಗಿದೆ.

ಬಸವಣ್ಣನವರ ಬದುಕನ್ನು ವಿವಿಧ ಪುರಾಣಗಳ ನೆರವಿನಿಂದ ಹೀಗೆ ಪುನಾರಚಿಸಬಹುದು.