ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ ಮಾದರಿ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಉಭಯ ಮಾದರಿಗಳಲ್ಲಿ ಅತ್ಯಧಿಕ ಶತಕಗಳ ದಾಖಲೆಯೂ ಅವರ ಹೆಸರಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ೫೦ ಶತಕ (ಉಭಯ ಮಾದರಿ ಸೇರಿ) ಬಾರಿಸಿದ ಮೊದಲ ಬ್ಯಾಟ್ಸ್ಮನ್ ತೆಂಡುಲ್ಕರ್. ಸದ್ಯ ಅವರು ೮೮ (೪೩ ಟೆಸ್ಟ್, ೪೫ ಏಕದಿನ) ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ.
ಯಾವುದೇ ವಿಷಯಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು,ಅರಿವನ್ನು ೬೦೦-೭೫೦ ಪದಗಳ ಮಿತಿಯಲ್ಲಿ ೧.ಅದು ಅ ಏನು?(ವ್ಯಕ್ತಿಯಾಗಿದ್ದರೆ ಯಾರು?) ೨.ಹುಟ್ಟು೩.ಮೊದಮೊದಲ ಹಂತದ ಬೆಳೆವಳಿಗೆ ೪.ಮುಂದಿನ ಹಂತಗಳು ೫.ಸಾಧನೆ,ಸಿದ್ಧಿ ೬.ಸುತ್ತಲಿನ ಜಗತ್ತಿಗೆ ಅದರಿಂದ ಆಗುತ್ತಿರುವ ಲಾಭ ೭.ಏನಾದರು ಹಾನಿ ಆಗುತ್ತಿದ್ದರೆ ಆ ವಿವರಗಳು ೮.ಸೂಕ್ತವಾದ ಅಂಕಿ-ಅಂಶಗಳು ೯.ಇಡೀ ವಿಷಯ ಕುರಿತು ಪ್ರಚಲಿತ ವಿದ್ಯಮಾನ,ಹೊಸ ಅರಿವಿನ ಸೇರ್ಪಡೆ- ಹೀಗೆ ಕ್ರಮವಾಗಿ ೭-೮ ಪದಗಳಲ್ಲಿ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಲೇಖನಗಳನ್ನು ಬರೆದು ಕಳಿಸಿ.ಪಕ್ಕದ ಗಿಡದಲ್ಲಿ ಅರಳಿರುವ ಹೂವಿನ ಕಥೆಯಿಂದ ಹಿಡಿದು ಬ್ರಹ್ಮಾಂಡದ ಉಗಮದವರೆಗಿನ ಲೇಖನಗಳನ್ನೂ ಕಳಿಸಬಹುದು.